Tuesday 7 July 2015

ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ

ಜನಪ್ರಿಯತೆ ಹಾಗೂ ಬೇಡಿಕೆಯ ಉತ್ತುಂಗ ಶಿಖರದಲ್ಲಿರುವಾಗಲೇ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ನಿಧನರಾದುದು ಯಕ್ಷರಂಗಕ್ಕೇ ಆಘಾತ ತಂದ ವಿಷಯ. ನಿಷ್ಕಲಂಕಿತ, ಸಚ್ಚ್ಯಾರಿತ್ರದುರ್ವ್ಯಸನರಾಹಿತ್ಯ, ಸರಳ, ವಿನಯಶೀಲ ಗುಣಗಳ ಶೆಟ್ಟರು ಇಂದು ನಮ್ಮೊಂದಿಗಿಲ್ಲಾ ಎನ್ನುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಾ ಇಲ್ಲ. ಶೇಣಿಯವರಂತೆ ಕುಳಿತುಕೊಳ್ಳುವ ಭಂಗಿ, ಕೆಲವೊಮ್ಮೆ ರಾ. ಸಾಮಗರ ಮುಖಭಾವ, ಕೊರ್ಗಿಯವರ ವಿದ್ವತ್ತಿನ ಅನಾವರಣ ಹಾಗೂ ತನ್ನದೇ ಶೈಲಿಯ ಮಾತುಗಾರಿಕೆ ಇವೆಲ್ಲಾ ಶೆಟ್ಟರಲ್ಲಿ ಮೇಳೈಸಿತ್ತು. ಸದಾ ಜ್ಞಾನಾಕಾಂಕ್ಷಿಯಾಗಿ, ಓದುವುದರಲ್ಲೇ ಮಗ್ನರು.
ಶೆಟ್ಟರು ೦೮/೦೫/೧೯೫೨ ರಂದು ವಾಸು ಶೆಟ್ಟಿ, ಲಿಂಗಮ್ಮ ದಂಪತಿಗಳ ಸುಪುತ್ರರಾಗಿ ಬಡ ಕೃಷಿಕ ಕುಟುಂಬದಲ್ಲಿ ಜನಿಸಿದರು. ಯಕ್ಷಗಾನದ ಹಿನ್ನೆಲೆಯಿಲ್ಲದ ಕುಟುಂಬದಲ್ಲಿ ಜನಿಸಿ, "ಸ್ವಯಂಮೇವ ಮೃಗೇಂದ್ರತ" ಎಂಬಂತೆ ಕೇವಲ ಆಸಕ್ತಿ ಹಾಗೂ ಛಲವನ್ನು ಮಾತ್ರ ನಂಬಿ ಮೇರುಮಟ್ಟದ ಕಲಾವಿದಅರ್ಥಧಾರಿಯಾದುದುವ್ಯಕ್ತಿಯೊಬ್ಬ ಛಲದಿಂದ ಎಷ್ಟು ಔನ್ನತ್ತ್ಯ ಸಾಧಿಸಬಹುದೆಂಬುದಕ್ಕೆ ದ್ರಷ್ಟಾಂತ. ಕಲಿತದ್ದು ಕೇವಲ ಐದನೇ ತರಗತಿಯಾದರೂ, ಯಾವನೇ ವಿದ್ವಾಂಸರ ಎದುರೂ ಅರ್ಥ ಹೇಳುವುದು ಕಲ್ಪನೆಗೆ ನಿಲುಕುವಂಥದಲ್ಲ.
ಶೆಟ್ಟರ ಮಾತಿನಲ್ಲೇ ಹೇಳುವುದಾದಲ್ಲಿ
"ನಾನು ವಿಶ್ವವಿದ್ಯಾನಿಲಯದಲ್ಲಿ ಕಲಿತವನಲ್ಲ. ಆದರೂ, "ವಿಶ್ವ" ಎಂಬ ವಿದ್ಯಾಲಯದಲ್ಲಿ ಕಲಿತಿದ್ದೇನೆ."
ಶೆಟ್ಟರು ಪ್ರಾರಂಭದ ಕಾಲದಲ್ಲಿ ಸಿಡುಕುತನತಾನೇ ಮೇಲ್ಗೈ ಆಗಬೇಕೆಂಬ ಧೋರಣೆ ತೋರಿಸಿದ್ದುಂಟು. ಕಾಲ ಸರಿದಂತೆ ಧೋರಣೆಯಿಂದ ಹೊರಬಂದುಕಲಾವಿದರಿಗೆ ಮಾದರಿ ಎಂಬಂತೆ ರೂಪುಗೊಂಡರು. ಎದುರಾಳಿ ವಿತಂಡವಾದ ಮಾಡಿದರೆಪಾತ್ರದ ಚೌಕಟ್ಟು ಮೀರಿ ಮಾತಾಡಿದರೆ, ಕಲಾವಿದರನ್ನು ಬಿಡುತ್ತಿರಲಿಲ್ಲ. ಪ್ರಸಂಗದ ಒಟ್ಟಂದ ಹಾಳಾಗಬಾರದೆಂಬ ಉದ್ದೇಶವೇ ಹೊರತು ಕಲಾವಿದನ ಮೇಲಿರುವ ಪೂರ್ವಾಗ್ರಹದಿಂದಲ್ಲ.
ಇದಕ್ಕೊಂದು ಉದಾಹರಣೆ ಶೆಟ್ಟರು ಪೆರ್ಡೂರು ಮೇಳದಲ್ಲಿರುವಾಗ "ದಕ್ಷ ಯಜ್ಞಪ್ರಸಂಗ. ದಕ್ಷನ ಪಾತ್ರಧಾರಿಪೀಠಿಕೆಯಲ್ಲಿ  
"ನನ್ನ ಕೊನೆ ಮಗಳು ಶಂಖದಲ್ಲಿ ಸಿಕ್ಕಿದ ಕಾರಣ ಅವಳಿಗೆ ಶಂಕರಿ ಎಂದು ಹೆಸರಿಟ್ಟಿದ್ದೇನೆ" ಎಂದರು.
ಆದರೆ ಈಶ್ವರನ ಪೀಠಿಕೆಯಲ್ಲಿ ಶೆಟ್ಟರು,
"ಶಂಕರನ ಮಡದಿಯಾದ ಕಾರಣ ಶಂಕರಿಯೇ ಹೊರತು ಶಂಖದಲ್ಲಿ ಸಿಕ್ಕಿದ್ದಕ್ಕಾಗಿ ಅಲ್ಲ. ಶಂಖದಲ್ಲಿ ಸಿಕ್ಕಿದ ಕಾರಣಕ್ಕಾದರೆ ಶಂಖಿ ಎಂದಾದೀತೇ ಹೊರತು ಶಂಕರಿಯಲ್ಲ" ಎಂದರು. ತಪ್ಪನ್ನೇ ಜನರು ಸತ್ಯ ಎಂದು ತಿಳಿಯಕೂಡದು ಎಂಬ ಕಾರಣಕ್ಕಾಗಿ ಮಾತ್ರ ತಿದ್ದಿದ್ದು. ನಂತರ ಕಲಾವಿದರು 
"ನನಗಿದು ತಿಳಿದಿರಲಿಲ್ಲ. ಉಳಿದವರು ರೀತಿ ಹೇಳುತ್ತಿದ್ದ ಕಾರಣ ನಾನು ಹೇಳಿದ್ದು. ತಪ್ಪನ್ನು ತಿದ್ದಿದಕ್ಕೆ ಕೃತಜ್ಞ" ಎಂದರು.
(ಶೆಟ್ಟರೇ ನನ್ನಲ್ಲಿ ಹೇಳಿದ್ದು)

ಕುರಿಯ ವಿಟ್ಟಲ ಶಾಸ್ತ್ರೀ ಹಾಗೂ ಪಡ್ರೆ ಚಂದು ಎಂಬ ಈರ್ವ ಯಕ್ಷ ದಿಗ್ಗಜರನ್ನು ಗುರುಗಳನ್ನಾಗಿ ಪಡೆದ ಶೆಟ್ಟ್ರು, ಗುರುಗಳ ಎದುರಲ್ಲೇ ತಿರುಗಾಟದಲ್ಲಿ, ಪಡ್ರೆ ಚಂದುಎದುರು ಪಾತ್ರವಾಗಿ "ಗುರುಗಳನ್ನೇ ಮೀರಿದವ ನಮ್ಮ ಚೆನ್ನಪ್ಪ" ಎಂದು ವೇದಿಕೆಯಲ್ಲೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮಲ್ಲ, ಧರ್ಮಸ್ತಳ, ಕಟೀಲು, ಬಪ್ಪನಾಡು, ಕದ್ರಿ ಮುಂತಾದ ತೆಂಕುತಿಟ್ಟಿನ, ಸಾಲಿಗ್ರಾಮ , ಪೆರ್ಡೂರು, ಬಡಗು ತಿಟ್ಟಿನಲ್ಲೂ ತಿರುಗಾಟ ನಡೆಸಿದ್ದು, ತಮ್ಮ ಕೊನೆಯ ಮೇಳವಾಗಿ ಹೊಸನಗರ ಮೇಳದ ಪ್ರಧಾನ ಕಲಾವಿದರಾಗಿ ಮಿಂಚಿದವರು. ಹೆಚ್ಚಾಗಿ ಸಾತ್ವಿಕ ಪಾತ್ರಗಳಾದ ಶ್ರೀಕೃಷ್ಣ, ವಿಷ್ಣುಜಾಬಾಲಿ, ಹನೂಮಂತ, ಭರತ, ಭೀಷ್ಮ, ದೇವವೃತ, ಅಗಸ್ತ್ಯಚ್ಯವನ, ಸುಧನ್ವ, ಶ್ರೀರಾಮ, ವಿಕ್ರಮಾದಿತ್ಯ, ತುಳು ಪ್ರಸಂಗಳಾದ ಕೋಟಿಚೆನ್ನಯ, ಕಾಂತಬಾರೆ ಬುದಬಾರೆ, ಗೆಜ್ಜೆದಪೂಜೆ, ಗರುಡಕೇಂಜವ, ದಳವಾಯಿ ದುಗ್ಗಣ್ಣ, ತುಳುನಾಡ ಸಿರಿ ಮುಂತಾದ ಪಾತ್ರಗಳಿಗೆ ತನ್ನದೇ "ಛಾಪು" ಒತ್ತಿದವರು. ವಿಷ್ಣು, ಕೃಷ್ಣ ಪಾತ್ರಗಳನ್ನು ಅತೀವವಾಗಿ ಮೆಚ್ಚುತ್ತಿದ್ದ ಶೆಟ್ಟರು, ಪಾತ್ರಗಳಿಗೆ ತನ್ನದೇ ಕಿರೀಟವನ್ನು ಬಳಸುತ್ತಿದ್ದರು. ಶೆಟ್ಟರ ಜೀವಮಾನದ ಕೊನೆಯ ಪಾತ್ರ "ಗರುಡೋಧ್ಭವ" ಶ್ರೀವಿಷ್ಣುವೇ ಆಗಿದ್ದುದು ಕಾಕತಾಳೀಯ.
"ತೆಂಕುಬಡಗು ವೇಷಧಾರಿ ಹಾಗೂ ಅರ್ಥಧಾರಿ" ಹೀಗೆ ಯಕ್ಷರಂಗದ ನಾಲ್ಕೂ ಮಜಲುಗಳಲ್ಲೂ ಏಕಪ್ರಕಾರವಾಗಿ ಮಿಂಚಿದ ಕೇವಲ ಬೆರಳೆಣಿಕೆಯ ಕಲಾವಿದರಲ್ಲಿ ಚೆನ್ನಪ್ಲ ಶೆಟ್ಟರೂ ಒಬ್ಬರು ಎನ್ನುವುದು ಅವರ ಸಾಧನೆಗೆ ಹಿಡಿದ ಕನ್ನಡಿ
ಶೆಟ್ಟರು ತಾವು ನಿರ್ವಹಿಸುವ ಪಾತ್ರಗಳಿಗೆ ನ್ಯಾಯ ಒದಗಿಸುವುದರಲ್ಲಿ ಅಪ್ರತಿಮರು. ವಾದಕ್ಕೆ ನಿಂತರಂತೂ ಎದುರಿನ ಕಲಾವಿದರು ಯಾರೆಂದೂ ನೋಡುವವರಲ್ಲ. ನಿಟ್ಟಿನಲ್ಲಿ ದಿ. ಶೇಣಿಯವರನ್ನು ನೆನಪಿಸುವಂತಿದ್ದರು. ಮೂಡಂಬೈಲು ಶಾಸ್ತ್ರಿಗಳು ಕೈಕಂಬದ ಶೆಟ್ಟರ ಸಂಸ್ಮರಣೆಯಂದು ನುಡಿದ ಮಾತು ಉಲ್ಲೇಖನೀಯ.
"ನಾನು ತಾಳಮದ್ದಳೆಯಲ್ಲಿ ನನ್ನ ಎದುರಾಳಿ ಯಾರೇ ಆದರೂ ಯೋಚಿಸುವವನಲ್ಲಆದರೆ ಎಲ್ಲಿಯಾದರೂ, ಚೆನ್ನಪ್ಪ ಶೆಟ್ಟಿ ಎದುರಾಳಿಯೆಂದು ತಿಳಿದಲ್ಲಿ ಪೂರ್ವ ತಯಾರಿಯೊಂದಿಗೇ ಬರುವುದುಏಕೆಂದರೆ ಚೆನ್ನಪ್ಪನ ಎದುರು ನಾನು ಸಿಕ್ಕಿಬೀಳಬಾರದೆಂದು."
ವರ್ತಮಾನ ಕಾಲದ "ನಡೆದಾಡುವ ಪುರಾಣ, ಶಾಸ್ತ್ರಗಳ ವಿಶ್ವಕೋಶ" ಎನಿಸಿದ ಶಾಸ್ತ್ರಿಗಳು ಮಾತನ್ನು "ಕೇವಲ ಔಪಚಾರಿಕವಾಗಿ ಹೇಳಿದ್ದಲ್ಲ. ಇದು ಮನದಾಳದ ಮಾತು" ಎಂದಿದ್ದರು.
ಸದಾ ಪುಸ್ತಕವನ್ನು ಓದುತ್ತಿದ್ದ ಶೆಟ್ಟರು ಅಧ್ಯಯನಶೀಲರು. ಸುಪ್ರಸಿದ್ಧ ಅರ್ಥಧಾರಿಗಳಾದ ಡಾ|| ಜೋಷಿಯವರು ಯಾವಾಗಲೂ ಶೆಟ್ಟರ ಎದುರೇ ಹೇಳುತ್ತಿದ್ದ ಮಾತು
ಚೆನ್ನಪ್ಪನಿಗೆ ದಾರಿಯಲ್ಲಿ ಪುಸ್ತಕದ ಹಾಳೆ ಸಿಕ್ಕಿದರೂ, ಅದನ್ನು ಹೆಕ್ಕಿ, ಓದಿ, ಅದರಲ್ಲಿ ಏನಾದರೂ ಹೊಸ ವಿಷುಯ ಸಿಗುತ್ತದಾ ಎಂದು ನೋಡುವವರು.”
ಡಾ|| ಜೋಷಿಯವರ ಬಗ್ಗೆ ಒಂದು ಮಾತು.
ಜೋಷಿಯವರು ನೇರ ನುಡಿಯವರು. ತಪ್ಪನ್ಮು ತಪ್ಪೇ ಎಂದು ಹೇಳುವವರು. ಯಾರನ್ನೂ ಒಲೈಸುವವರಲ್ಲ. ಕಲಾವಿದರು ಯಾರೇ ಆಗಲಿ, ತಪ್ಪಿದಲ್ಲಿ ಆವಾಗಲೇ ಹೇಳುವವರು. ಹಿರಿಯ, ಕಿರಿಯ ಎಂದು ನೋಡುವವರಲ್ಲ. ಎಷ್ಟೋ ಬಾರಿ ನನ್ನಲ್ಲೇ ಹೇಳಿದವರು. ಆದರೆ ಜೋಷಿಯವರು ಚೆನ್ನಪ್ಪ ಶೆಟ್ಟರ ಬಗ್ಗೆ ಯಾವುದೇ ವಿಮರ್ಶೆ ಮಾಡಿದ್ದು ನನ್ನ ಅವಗಾಹನೆಗೆ ಬಂದಿಲ್ಲ.
ಉಡುಪಿಯಲ್ಲೊಂದು ಆಟ. "ಕೋಟಿಚೆನ್ನಯ" ಪ್ರಸಂಗ. ಸಾಮಾನ್ಯವಾಗಿ ಶೆಟ್ಟರು ಕೋಟಿ ಮಾಡುವವರು. ಆದರೂ ಅಂದು ಶೆಟ್ಟರಿಗೆ "ಪೆರುಮಳೆ ಬಲ್ಲಾಳ" ಕೊಟ್ಟಿದ್ದರುಶೇಣಿಯವರ ಗುಣ ಶೆಟ್ಟರಲ್ಲೂ ಇತ್ತು. ತಮ್ಮದೇ ಪಾತ್ರ ಸರಿಯೆಂದು ಚಿತ್ರಿಸುವುದುಕೋಟಿಚೆನ್ನಯರ ವಿಚಾರಣೆ ಸಂಧರ್ಭ.
ಮೂಲತಃ ಕೃಷಿಕರಾದ ಶೆಟ್ಟರು, ಕೃಷಿಯ ಮೂಲತತ್ತ್ವವನ್ನು ಉಲ್ಲೇಖಿಸಿ ಕೋಟಿಚೆನ್ನಯರದ್ದೇ ತಪ್ಪೆಂದು ಸಾಧಿಸಿದಾಗ ಕೋಟಿಚೆನ್ನಯರಿಂದ ಸಮರ್ಪಕ ಉತ್ತರ ಬಾರದ ಕಾರಣ ಕೋಟಿಚೆನ್ನಯರೇ ತಪ್ಪಿತಸ್ತರೆಂದು ಸಾಧಿಸಲ್ಪಟ್ಟಿತುಇದು ಒಂದು ವರ್ಗದವರ ಪ್ರತಿಭಟನೆಗೆ ಕಾರಣವಾಯಿತು
ಕೊನೆಗೆ ಸಂಘಟಕರು ಮೂರೇ ವಾರದಲ್ಲೇ ಪುನಃ ಅದೇ ಸ್ಥಳದಲ್ಲೇ, ಅದೇ ಪ್ರಸಂಗ ಆಡಿಸಿ ಶೆಟ್ಟರಿಗೆ ಕೋಟಿ ಪಾತ್ರ ಕೊಟ್ಟಾಗ, ಕೋಟಿಚೆನ್ನಯರದ್ದೇ ಸರಿ ಎಂದು ಸಾಧಿಸಿದಾಗಅಂದು ವಿರೋಧಿಸಿದವರಿಂದಲೇ ಮೆಚ್ಚುಗೆ ಬಂತು.
ಪಡ್ರೆ ಚಂದು, ಕುರಿಯ ಶಾಸ್ತ್ರಿಗಳು ಶೆಟ್ಟರ ನೇರ ಗುರುಗಳಾದರೆ, ಶೆಟ್ಟರ ಸರ್ವತೋಮುಖ ಉನ್ನತಿಗೆ ಕಾರಣರಾದವರು ಅವರ ಸೋದರ ಸಂಬಂಧಿ, ಹಿರಿಯ ಅರ್ಥಧಾರಿ ಹಾಗೂ ಸಾಮಾಜಿಕ ವಲಯದಲ್ಲಿ ಈಗಲೂ ಗುರುತಿಸಲ್ಪಟ್ಟಿರುವ ಶ್ರೀ ಕುತ್ಲೋಡಿ ವಾಸು ಶೆಟ್ಟಿಯವರು. ಎರಡನೆಯವರು, ಪ್ರಖ್ಯಾತ ಛಾಂದಸರಾದ ಡಾ|| ನಾರಾಯಣ ಶಿಮಂತೂರು. ಮೂರನೆಯವರು, ಅರ್ಥಗಾರಿಕೆಗೆ ಗುರುತ್ವ ನೀಡಿದ ಖ್ಯಾತ ವಿದ್ವಾಂಸ ದಿ. ಕೊರ್ಗಿಯವರು.
ಶೆಟ್ಟರ ಅರ್ಥಗಾರಿಕೆ ಬಲು ಸೊಗಸು. ಜೈಮಿನಿ ಭಾರತದ ಶ್ಲೋಕಗಳನ್ನು ಕಂಠಪಾಠ ಮಾಡಿದ್ದ ಶೆಟ್ಟರ ಅರ್ಥಗಳಲ್ಲಿ, ಜೈಮಿನಿ ಭಾರತದ ಶ್ಲೋಕಗಳು ಪುಂಖಾನುಪುಂಖವಾಗಿ ಬರುತ್ತಿದ್ದದ್ದು ಯಕ್ಷಗಾನಾಭಿಮಾನಿಗಳಿಗೆ ತಿಳಿದಿರುವ ವಿಷಯವೇ ಆಗಿದೆ. ಹೆಣ್ಣನ್ನು ವರ್ಣಿಸುವ ಸಂಧರ್ಭ, ಜೈಮಿನಿ ಭಾರತದಲ್ಲಿರುವ ೧೨ ರಾಶಿಗಳ ಹೆಸರು ಬರುವ ಶ್ಲೋಕವನ್ನು ನಿರರ್ಗಳವಾಗಿ ಹೇಳುವ ಶೈಲಿ ಈಗಲೂ ಕಣ್ಣ ಮುಂದಿದೆ.
ದಿ. ಚೆನ್ನಪ್ಪಶೆಟ್ಟರ ಬಗ್ಗೆ ನನಗೆ ವೈಯುಕ್ತಿಕವಾಗಿ ಏನೋ ಅವಿನಾಭಾವ ಸಂಬಂಧ. ಅವರ ಬಗ್ಗೆ ಬರೆದಂತೆ ನನ್ನ ಕಣ್ಣಲ್ಲಿ ಅಶ್ರುಧಾರೆ ಹರಿಯಲಾರಂಭಿಸಿದ ಕಾರಣ ಇಲ್ಲಿಗೇ ಮುಕ್ತಾಯಗೊಳಿಸುತ್ತಿದ್ದೇನೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಯಕ್ಷರಂಗದ ಶ್ರೇಷ್ಠ ಅರ್ಥಧಾರಿ, ನಮ್ಮ ಸನ್ಮಿತ್ರ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯವರ ಸಂಪಾದಕತ್ವದ "ಯಕ್ಷರ ಚೆನ್ನ"

ವಮದಪದವಿನಲ್ಲಿ ದಸರಾದಲ್ಲಿ ಒಂದು ಕೂಟ. "ವೀರಮಣಿ ಕಾಳಗ" ಪ್ರಸಂಗ. ದಿ. ಚೆನ್ನಪ್ಪಶೆಟ್ಟರ ವೀರಮಣಿ, ವಾ.ಸಾಮಗರ ಹನೂಮಂತ. ಸಂಧಾನದ ಸಂಧರ್ಭ ವಾ.ಸಾಮಗರು ಶೆಟ್ಟರಲ್ಲಿ 
"ನಿನಗೆರಂ’ ಎಂದರೆ ಗೊತ್ತುಂಟಾ" ಎಂದರು. ಕೂಡಲೇ ಶೆಟ್ಟರು 
"ಅದು ನಮ್ಮ ರಾಜ್ಯದಲ್ಲಿ ಇಲ್ಲ. ಆದ ಕಾರಣ ನನಗೆ ಗೊತ್ತಿಲ್ಲ" ಎಂದರು.
(ವಾ.ಸಾಮಗರು "ರಾಮ" ಶಬ್ದದ ಧಾತು ಪದರಮ್ವನ್ನು ರಂಜನೆಗೋಸ್ಕರರಂಎಂದಿದ್ದರು.)

"ಭೀಷ್ಮವಿಜಯ" ಪ್ರಸಂಗದಲ್ಲಿ ಚೆ.ಶೆಟ್ಟರ ಭೀಷ್ಮ, ವಾ.ಸಾಮಗರ ಪರಶುರಾಮ. ವಾದ ಜೋರಾಗಿಯೇ ನಡೆಯಿತು.( ಕಾಲದಲ್ಲಿ ಚೆ.ಶೆಟ್ಟಿ-ವಾ.ಸಾಮಗರ ಜೋಡಿ ಜನಾಕರ್ಷಕವಾಗಿತ್ತು.)
ಸಾಮಗರು
"ಭೀಷ್ಮಾ, ತಂದೆಗೋಸ್ಕರ ವೈವಾಹಿಕ ಜೀವನವನ್ನೇ ಬಲಿ ಕೊಟ್ಟವರಿದ್ದಾರೆಯೇ, ನೀನೊಬ್ಬ ಮೂರ್ಖ ಎನ್ನಲು ಬೇರೆ ಉದಾಹರಣೆ ಬೇಕೇ?" ಎಂದರು.
ಚೆ.ಶೆಟ್ಟರು ಅತಿ ವಿನಯದಿಂದಲೇ
"ಗುರುಗಳೇ, ಏನು ಮಾಡುವುದು ಹೇಳಿ. ತಂದೆಗಾಗಿ ಹೆತ್ತ ತಾಯಿಯ ಕೊರಳನ್ನೇ ಕತ್ತರಿಸಿದ ಪುಣ್ಯ ಪುರುಷರ ನಾಡಲ್ಲೇ ಜನಿಸಿದವನಲ್ಲವೇ ನಾನು" ಎಂದಾಗ ಸಭೆಯಿಂದ ಚಪ್ಪಾಳೆ.

ಜೋಕಟ್ಟೆಯಲ್ಲಿ "ವೀರಮಣಿ ಕಾಳಗ" ಕೂಟ. ವಾ.ಸಾಮಗರ ವೀರಮಣಿ, ಚೆ.ಶೆಟ್ಟರ ಈಶ್ವರ. ವಾದ ಜೋರಾಗಿ ನಡೆದಾಗ ಪ್ರೇಕ್ಷಕನೋರ್ವ, ಸಾಮಗರ ಅರ್ಥ ದೀರ್ಘವಾಯಿತೆಂದು ಸಭೆಯಿಂದ ಗಲಾಟೆ ಎಬ್ಬಿಸಿದ. ಸಾಮಗರು ಪ್ರೇಕ್ಷಕನನ್ನು ತರಾಟೆಗೆ ತೆಗೆದುಕೊಂಡಾಗ ಕೂಟ ನಿಂತಿತು.
ಆಗ, ಚೆ.ಶೆಟ್ಟರು ಮಧ್ಯಪ್ರವೇಶಿಸಿ, ಪ್ರೇಕ್ಷಕನಿಗೆ
"ದಯವಿಟ್ಟು ನಿಮಗೆ ಆಸಕ್ತಿ ಇಲ್ಲದಿದ್ದಲ್ಲಿ ನೀವು ಹೋಗಬಹುದು. ನಿಮಗೊಬ್ಬರಿಗಾಗಿ ಕೂಟ ಹಾಳಾಗಬಾರದು. ನಾವೆಲ್ಲಾ  ಕೂಟದ ಕಲಾವಿದರು ಕೇವಲ ನಾಲ್ಕು ಸಾಲಿನ ಪದ್ಯಕ್ಕೆ ನೂರಾರು ವಾಕ್ಯಗಳ ಅರ್ಥ ಹೇಳುವುದೂ ಒಂದು ಕಲೆ ಎಂದು ತಿಳಿಯಿರಿ" ಎಂದಾಗ ಪ್ರೇಕ್ಷಕ ಸಭೆಗೆ ಕೈ ಮುಗಿದುತನ್ನಿಂದ ತಪ್ಪಾಯಿತೆಂದು ಕ್ಷಮೆ ಕೋರಿದ.
( ಪ್ರಕರಣ ನಡೆದಾಗ ನಾನು ಪ್ರತ್ಯಕ್ಷ್ಯ ಸಾಕ್ಷಿಯಾಗಿದ್ದೆ.)

ತುಳು ಪ್ರಸಂಗಗಳಲ್ಲೇ ಪ್ರಚಂಡ ಜಯಭೇರಿ ಬಾರಿಸಿದ "ಗೆಜ್ಜೆದ ಪೂಜೆ" ಎರಡನೇ ಭಾಗ "ಪೂತಪೂಜೆ" ಪ್ರಸಂಗದಲ್ಲಿ ಕೀರ್ತಿವರ್ಮನಾಗಿ ಚೆ.ಶೆಟ್ಟಿಯವರುವಿದ್ಯಾಭ್ಯಾಸ ಮುಗಿಸಿ ಬಂದ ತನ್ನ ಇಬ್ಬರು ಮಕ್ಕಳಲ್ಲಿ
"ಜೋಕುಲೇನಿಕುಲೆಕ್ಕೋಂಜಿ ಎನ್ನ ಪರೀಕ್ಷೆ. ’ಕಕ್ಕೆ ಕೆಂಪು, ಕುಪುಲು ಕೆಂಪುಉಂದೆನ್ ಉಸಿರು ಬುಡಂದೇ ಪತ್ತ್ ಸರ್ತಿ ಪನ್ಲೇ"
(ಮಕ್ಕಳೇ, ನಿಮಗೊಂದು ಪರೀಕ್ಷೆ. ’ಕಕ್ಕೆ ಕಪ್ಪು ಕುಪುಲು ಕೆಂಪುಇದನ್ನು ಉಸಿರು ಬಿಡದೇ ಹತ್ತು ಸಲ ಹೇಳಿ.)

ವಾಕ್ಯವನ್ನು ನೀವೂ ಹತ್ತು ಸಲ ಉಸಿರು ಬಿಡದೇ ಹೇಳಲಿಕ್ಕಾಗುತ್ತದಾ ಎಂದು ಪ್ರಯತ್ನಿಸಿ ನೋಡಿ.

O :-   ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
           M.  Shantharama Kudva, Moodabidri

No comments:

Post a Comment