Thursday 2 July 2015

ಬೆಂಕಿ ನಿನ್ನನ್ನು ಸುಡದು

ಎಂಪೆಕಟ್ಟೆ ರಾಮಯ್ಯ ರೈ ಗಳ ಎಲ್ಲಾ ಪಾತ್ರಗಳೂ ಅದ್ಭುತ. ಅದರಲ್ಲೂ "ವಂಶವಾಹಿನಿ" ಯ ಯುಧಾಜಿತು ಅವಿಸ್ಮರಣೀಯ. ಪ್ರಾರಂಭದಿಂದ ನಾಲ್ಕು ಘಂಟೆ ತನಕ ರಂಗಸ್ಥಳದಲ್ಲಿ ಹಾಸ್ಯದ ಹೊನಲು. ಸುದರ್ಶನ ಹಾಗೂ ಆತನ ತಾಯಿ ಋಷ್ಯಾಶ್ರಮ (ಭಾರದ್ವಾಜ) ಸೇರಿದಾಗ ಅಟ್ಟಿಸಿಕೊಂಡು ಹೋಗುತ್ತಾನೆ. ಆಗ ಋಷಿಯು ಬೆಂಕಿಯನ್ನು ಸೃಷ್ಟಿಸಿದಾಗ ಋಷಿಗೆ ಶರಣಾಗಿ ಬೆಂಕಿ ತನ್ನನ್ನು ಸುಡದಂತೆ ಅನುಗ್ರಹಿಸಬೇಕಾಗಿ ಕೇಳಿಕೊಳ್ಳುತ್ತಾನೆ. ಋಷಿ ಅನುಗ್ರಹಿಸಿದಾಗ ಸಂತಸ ವ್ಯಕ್ತಪಡಿಸಿ, ಸ್ವಲ್ಪ ಮುಂದೆ ಬಂದು ಒಂದು ಕ್ಷಣ ಯೋಚಿಸಿ, ಪುನಹ ಋಷಿಯ ಬಳಿ ತೆರಳುತ್ತಾನೆ. ಋಷಿಯಲ್ಲಿ
"ಭಗವಾನ್, ನೀವ್ ಈಗ ನನ್ನನ್ನು ಅನುಗ್ರಹಿಸಿದ್ದೋ, ಶಪಿಸಿದ್ದೋ?" ಎಂದು ಕೇಳುತ್ತಾರೆ.
ಋಷಿ, "ಅನುಗ್ರಹಿಸಿದ್ದು. ಇನ್ನು ಬೆಂಕಿ ನಿನ್ನನ್ನು ಸುಡದು"  ಎಂದಾಗ ರೈಗಳು,
"ಅದೇ, ನನಗೆ ಸಂಶಯ ಬಂದದ್ದು ಗುರುವರ್ಯಾ, ಬೆಂಕಿ ನನ್ನನ್ನು ಸುಡದಿದ್ದರೆ, ನಾಳೆ ನಾನು ಸತ್ತರೆ ಈ ಶರೀರ ಕೊಳೆತುಹೋಗದೇ" ಎಂದಾಗ ಸಭೆಯೇ ಘೊಳ್ಳೆಂದಿತು.

O :-  ಎಂ. ಶಾಂತರಾಮ ಕುಡ್ವ, ಮೂಡಬಿದಿರೆ
          M.  Shantharama Kudva, Moodabidri

No comments:

Post a Comment